Thursday, 5 September 2024
Friday, 9 August 2024
Saturday, 15 June 2024
BOOKS DONATION TO GOVT PRIMARY SCHOOL 15 JUNE 2024
Books Donations at Three government primary schools were covered today at Chitradurga District. It was a wonderful day, and the kids were so happy to receive the books at the start of the academic year. Kids and the school staff thanked Janaseva trust member -RunAddicts for this great cause.
Wednesday, 15 May 2024
ದಿನ ಪತ್ರಿಕೆಯ ತುಣುಕಿನ ಜಾಡು ಹಿಡಿದು ಜನಸೇವೆ!
ಕಳೆದವಾರ ಕನ್ನಡ ದಿನಪತ್ರಿಕೆಯೊಂದರಲ್ಲಿ "ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕುಂದಾಪುರ ತಾಲೂಕಿನ ಹಕ್ಲಾಡಿಯ ಕುಮಾರಿ ಧನ್ಯಾ" ಕುರಿತಾದ ಸುದ್ದಿ ತುಣುಕೊಂದನ್ನು ಶ್ರೀಯುತ ಕೃಷ್ಣರಾಜ ಶರ್ಮ ಜನಸೇವಾ ತಂಡದ ಗಮನಕ್ಕೆ ತಂದರು. ವಿಷಯ ಪರಿಶೀಲಿಸಿದ ತತ್ಕ್ಷಣ ನೆರವಿನ ಭರವಸೆ ನೀಡಿದರು.
ಅಶಕ್ತರಿಗೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸದಾ ನೆರವಾಗುವ ವಿಶಿಷ್ಟ ಉದ್ದೇಶವನ್ನೊಳಗೊಂಡು ಸ್ಥಾಪನೆಗೊಂಡ "ಜನಸೇವಾ" ಸಂಸ್ಥೆಯ "ವಾಸ್ತವ ಪರಿಶೋಧನಾ ತಂಡ" ಈ ವರದಿಯ ಸತ್ಯಾಸತ್ಯತೆ ವಿವರ ಪಡೆಯಲು ಕಾರ್ಯಪ್ರವೃತ್ತವಾಯಿತು.
ಎಲ್ಲ "ಪ್ರಮಾಣಿತ ಪರಿಶೀಲನೆ"ಯ ನಂತರ ಕುಮಾರಿ ಧನ್ಯಾಳಿಗೆ ಪಿಯುಸಿ ವಿದ್ಯಾಭ್ಯಾಸಕ್ಕೆ ಸೇರಲು ಆರ್ಥಿಕ ಮುಗ್ಗಟ್ಟು ಇರುವ ವಿಚಾರ ದೃಢವಾಯಿತು. ವಿವರಗಳನ್ನು ಕೃಷ್ಣರಾಜ ಶರ್ಮಾ ಅವರೊಡನೆ ಹಂಚಿಕೊಂಡೆವು.
ತತ್ಕ್ಷಣ ಶ್ರೀಯುತ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ ಇವರು ತಮ್ಮ ಮಾಲೀಕತ್ವದ ಸಂಸ್ಥೆಯ ವತಿಯಿಂದ ಕಾಲೇಜು ಶುಲ್ಕವಾದ ರೂ. 61,000/- ದ ಜೊತೆಗೆ ಸಮವಸ್ತ್ರ ಮತ್ತು ಪುಸ್ತಕಗಳ ಖರ್ಚುವೆಚ್ಚ ಭರಿಸುವುದಾಗಿ ತಿಳಿಸಿದರು.
ಅವಶ್ಯಕತೆ ಇರುವವರಿಗೆ ಕೂಡಲೇ ಅವಶ್ಯ ನೆರವಾಗುವ ದೊಡ್ಡ ತಂಡ ನಮ್ಮೊಡನೆ ಇರುವುದು ಮತ್ತೆ ರುಜುವಾತಾಯಿತು ಹಾಗೂ ಅದು ನಮ್ಮ ದೊಡ್ಡ ಆಸ್ತಿ ಮತ್ತು ಸೌಭಾಗ್ಯ! ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸದಾ ಸಹಕರಿಸುತ್ತಿರುವ ಶ್ರೀಯುತ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ ಮತ್ತವರ ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದಗಳು.
ಧನ್ಯಾಳ ಕಾಲೇಜು ಶುಲ್ಕ ರೂ. 33,800/- ಮೊದಲ ಕಂತು ಜನಸೇವಾ ಚಾರಿಟೇಬಲ್ ಅಸೋಸಿಯೇಷನ್'ನ CSR ಚಟುವಟಿಕೆಯ ಭಾಗವಾಗಿ ನೇರ ಧನ್ಯಾ ಸೇರಲಿಚ್ಛಿಸಿರುವ ಕಾಲೇಜಿಗೆ ನೀಡಲಿದ್ದೇವೆ.
ಬನ್ನಿ, ಜೊತೆಗೂಡಿ. ಅಶಕ್ತರಿಗೆ ನಮ್ಮಿಂದಾದ ಶಕ್ತಿ ತುಂಬೋಣ. ಸರ್ವೇ ಸಂತು ನಿರಾಮಯಾಃ... ಧನ್ಯವಾದಗಳು.
Sunday, 21 April 2024
Monday, 25 March 2024
CSR ACTIVITY BY JANASEVA CHARITABLE ASSOCIATION : 24 MAR 24
ಬಂಧುಗಳೇ, ಶ್ರೀ ಸಾಯಿ ಸೇವಾ ಪ್ರತಿಷ್ಠಾನಮ್ ದೈಗೊಳಿ,ಮಂಜೇಶ್ವರ. ಇಲ್ಲಿ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ ಬೆಂಗಳೂರು ಇದರ ವತಿಯಿಂದ ಇಂದು 1.5 ಲಕ್ಷ ರೂಪಾಯಿಗಳ ಚೆಕ್ ನ್ನು ಹಸ್ತಾಂತರಿಸಲಾಯಿತು.
ಕರಾಡ ಸಹಾಯಕ ಬಂಧು ವಿನ ಪ್ರತಿನಿಧಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಈ ಕೇಂದ್ರದಲ್ಲಿ ಸದ್ಯಕ್ಕೆ ನಮ್ಮ ಸಮಾಜದ ಮೂರು ಬಂಧುಗಳು ಚಿಕಿತ್ಸೆ ಪಡೆಯುತ್ತಿದ್ದು ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಲಾಯಿತು🙏
#CSR_Activity