Wednesday, 15 May 2024

ದಿನ ಪತ್ರಿಕೆಯ ತುಣುಕಿನ ಜಾಡು ಹಿಡಿದು‌ ಜನಸೇವೆ!

ಕಳೆದವಾರ ಕನ್ನಡ ದಿನಪತ್ರಿಕೆಯೊಂದರಲ್ಲಿ "ಹತ್ತನೇ ತರಗತಿಯಲ್ಲಿ ಉತ್ತಮ ಅಂಕ‌ ಪಡೆದು‌ ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕುಂದಾಪುರ ತಾಲೂಕಿನ ಹಕ್ಲಾಡಿಯ ಕುಮಾರಿ ಧನ್ಯಾ" ಕುರಿತಾದ ಸುದ್ದಿ ತುಣುಕೊಂದನ್ನು ಶ್ರೀಯುತ ಕೃಷ್ಣರಾಜ ಶರ್ಮ ಜನಸೇವಾ ತಂಡದ ಗಮನಕ್ಕೆ ತಂದರು. ವಿಷಯ ಪರಿಶೀಲಿಸಿದ ತತ್ಕ್ಷಣ ನೆರವಿನ ಭರವಸೆ ನೀಡಿದರು.

ಅಶಕ್ತರಿಗೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸದಾ ನೆರವಾಗುವ ವಿಶಿಷ್ಟ ಉದ್ದೇಶವನ್ನೊಳಗೊಂಡು‌ ಸ್ಥಾಪನೆಗೊಂಡ "ಜನಸೇವಾ" ಸಂಸ್ಥೆಯ "ವಾಸ್ತವ ಪರಿಶೋಧನಾ ತಂಡ" ಈ ವರದಿಯ ಸತ್ಯಾಸತ್ಯತೆ ವಿವರ ಪಡೆಯಲು ಕಾರ್ಯಪ್ರವೃತ್ತವಾಯಿತು.

ಎಲ್ಲ "ಪ್ರಮಾಣಿತ ಪರಿಶೀಲನೆ"ಯ ನಂತರ ಕುಮಾರಿ ಧನ್ಯಾಳಿಗೆ ಪಿಯುಸಿ ವಿದ್ಯಾಭ್ಯಾಸಕ್ಕೆ ಸೇರಲು ಆರ್ಥಿಕ ಮುಗ್ಗಟ್ಟು ಇರುವ ವಿಚಾರ ದೃಢವಾಯಿತು. ವಿವರಗಳನ್ನು ಕೃಷ್ಣರಾಜ ಶರ್ಮಾ ಅವರೊಡನೆ ಹಂಚಿಕೊಂಡೆವು.

ತತ್ಕ್ಷಣ ಶ್ರೀಯುತ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ ಇವರು ತಮ್ಮ ಮಾಲೀಕತ್ವದ ಸಂಸ್ಥೆಯ ವತಿಯಿಂದ ಕಾಲೇಜು ಶುಲ್ಕವಾದ ರೂ. 61,000/- ದ ಜೊತೆಗೆ ಸಮವಸ್ತ್ರ ಮತ್ತು ಪುಸ್ತಕಗಳ ಖರ್ಚುವೆಚ್ಚ ಭರಿಸುವುದಾಗಿ ತಿಳಿಸಿದರು. 

ಅವಶ್ಯಕತೆ ಇರುವವರಿಗೆ ಕೂಡಲೇ ಅವಶ್ಯ ನೆರವಾಗುವ ದೊಡ್ಡ ತಂಡ ನಮ್ಮೊಡನೆ ಇರುವುದು ಮತ್ತೆ ರುಜುವಾತಾಯಿತು ಹಾಗೂ ಅದು ನಮ್ಮ ದೊಡ್ಡ ಆಸ್ತಿ ಮತ್ತು ಸೌಭಾಗ್ಯ! ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸದಾ ಸಹಕರಿಸುತ್ತಿರುವ ಶ್ರೀಯುತ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ ಮತ್ತವರ ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದಗಳು.

ಧನ್ಯಾಳ ಕಾಲೇಜು ಶುಲ್ಕ ರೂ. 33,800/- ಮೊದಲ ಕಂತು ಜನಸೇವಾ ಚಾರಿಟೇಬಲ್  ಅಸೋಸಿಯೇಷನ್'ನ CSR ಚಟುವಟಿಕೆಯ ಭಾಗವಾಗಿ ನೇರ ಧನ್ಯಾ ಸೇರಲಿಚ್ಛಿಸಿರುವ ಕಾಲೇಜಿಗೆ ನೀಡಲಿದ್ದೇವೆ.


ಬನ್ನಿ, ಜೊತೆಗೂಡಿ. ಅಶಕ್ತರಿಗೆ ನಮ್ಮಿಂದಾದ ಶಕ್ತಿ ತುಂಬೋಣ. ಸರ್ವೇ ಸಂತು ನಿರಾಮಯಾಃ... ಧನ್ಯವಾದಗಳು.

ಹೆಚ್ಚಿನ ಮಾಹಿತಿಗೆ ಅಥವಾ ಜನಸೇವಾ ತಂಡ ಸೇರಲು ಸಂಪರ್ಕಿಸಿ:

ನಾಗರಾಜ ಉಪ್ಪಂಗಳ
ಅಧ್ಯಕ್ಷ, ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ (ರಿ.), ಬೆಂಗಳೂರು
📱9535000365

No comments:

Post a Comment